Wednesday, February 24, 2016

ನೀಲಕಂಠ ಹಕ್ಖಿಯ ( Indian Roller) ಕೆಲ ಚಿತ್ರಗಳು

ನೀಲಕಂಠ  ಹಕ್ಖಿ ಇದಕ್ಕೆ   ಆಂಗ್ಲ ಭಾಷೆಯಲ್ಲಿ  Indian Roller  ಹಾಗು Blue Jay ಎಂದು  ಕರೆಯಲಾಗುತ್ತದೆ.  ( ಈ ಪಕ್ಷಿಯ ಬಗ್ಗೆ   ಹೆಚ್ಚಿನ ವಿವರಗಳಿಗೆ ನೋಡಿ http://en.wikipedia.org/wiki/Indian_roller )

ಮೊನ್ನೆ ದಿನ ಈ ಹಕ್ಕಿಯ ಕೆಲ ಚಿತ್ತಗಳನ್ನು ತೆಗೆದಿದ್ದು ಅವುಗಳಲ್ಲಿ ಕೆಲವನ್ನು ಇಲ್ಲಿ ಹಾಕಿದ್ದೇನೆ.   

ಪಕ್ಷಿಗಳ ಚಿತ್ರ ತೆಗೆಯುವುದು ಒಂದು ಕಷ್ಟದ ಕೆಲಸವೆ, ಸರಿಯಾದ ಚಿತ್ರ ಬರಲು ಕೆಲವೊಮ್ಮೆ  ಅದೃಷ್ಟವೂ ಸಹ ಬೇಕು, ಏಕೆಂದರೆ ಪಕ್ಷಿಗಳು  ಬಹಳ ಸೂಕ್ಷ್ಮಮತಿಗಳು, ಒಂದು ಸ್ವಲ್ಪ ಶಬ್ದವಾದರೂ ಹಾರಿ ಹೋಗುತ್ತವೆ. ಪಕ್ಷಿಗಳು ಅತಿ ಚಟುವಟಿಕೆಯಿಂದಿರುವುದರಿಂದ ಅವುಗಳ ಚಿತ್ರ ತೆಗೆಯುವಾಗ ಬಹಳಷ್ಟು ತಾಳ್ಮೆ ಬೇಕು. ಅಂದು ನಾನು ತೆಗೆದದ್ದು 200 ಕ್ಕೂ ಹೆಚ್ಚು ಚಿತ್ರಗಳು, ಅವುಗಳಲ್ಲಿ ಸರಿಯಾಗಿ ಬಂದ ಚಿತ್ರಗಳು ಕೆಲವು ಮಾತ್ರ, ಒಂದು ಕ್ಷಣ ಯೋಚಿಸಿ ಡಿಜಿಟಲ್ ಫೋಟೋಗ್ರಫಿ ಬರುವ ಮೊದಲು ಛಾಯಾಗ್ರಹಂ ಎಷ್ಟು  ಕಷ್ಟ ಇತ್ತಲ್ಲವೇ?












ಇನ್ನೇನು ಫೋಟೋ ಕ್ಲಿಕ್ಕಿಸುವಷ್ಟರಲ್ಲೇ ಹಾರಿದ  ಇದು ಕಂಡು ಬಂದದ್ದು ಹೀಗೆ....


.......... 


.ಅಲ್ಲಿಂದ ಹಾರಿದ  ಇದು ಕುಳಿತದ್ದು ಒಂದು ಮರದ ತುದಿಯಲ್ಲಿ ....






































































1 comment: