ನೀಲಕಂಠ ಹಕ್ಖಿ ಇದಕ್ಕೆ ಆಂಗ್ಲ ಭಾಷೆಯಲ್ಲಿ Indian Roller ಹಾಗು Blue Jay ಎಂದು ಸಹ ಕರೆಯಲಾಗುತ್ತದೆ. ( ಈ ಪಕ್ಷಿಯ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ನೋಡಿ http://en.wikipedia.org/wiki/Indian_roller )
ಪಕ್ಷಿಗಳ ಚಿತ್ರ ತೆಗೆಯುವುದು ಒಂದು ಕಷ್ಟದ ಕೆಲಸವೆ, ಸರಿಯಾದ ಚಿತ್ರ ಬರಲು ಕೆಲವೊಮ್ಮೆ ಅದೃಷ್ಟವೂ ಸಹ ಬೇಕು, ಏಕೆಂದರೆ ಪಕ್ಷಿಗಳು ಬಹಳ ಸೂಕ್ಷ್ಮಮತಿಗಳು, ಒಂದು ಸ್ವಲ್ಪ ಶಬ್ದವಾದರೂ ಹಾರಿ ಹೋಗುತ್ತವೆ. ಪಕ್ಷಿಗಳು ಅತಿ ಚಟುವಟಿಕೆಯಿಂದಿರುವುದರಿಂದ ಅವುಗಳ ಚಿತ್ರ ತೆಗೆಯುವಾಗ ಬಹಳಷ್ಟು ತಾಳ್ಮೆ ಬೇಕು.
ಮೊನ್ನೆ ದಿನ ಈ ಹಕ್ಕಿಯ ಕೆಲ ಚಿತ್ತಗಳನ್ನು ತೆಗೆದಿದ್ದು ಅವುಗಳಲ್ಲಿ ಕೆಲವನ್ನು ಇಲ್ಲಿ ಹಾಕಿದ್ದೇನೆ. ಅಂದು ನಾನು ತೆಗೆದದ್ದು 200 ಕ್ಕೂ ಹೆಚ್ಚು ಚಿತ್ರಗಳು, ಅವುಗಳಲ್ಲಿ ಸರಿಯಾಗಿ ಬಂದ ಚಿತ್ರಗಳು ಕೆಲವು ಮಾತ್ರ, ಒಂದು ಕ್ಷಣ ಯೋಚಿಸಿ ಡಿಜಿಟಲ್ ಫೋಟೋಗ್ರಫಿ ಬರುವ ಮೊದಲು ಛಾಯಾಗ್ರಹಣ ಎಷ್ಟು ಕಷ್ಟ ಇತ್ತಲ್ಲವೇ?
 |
ಕೆಳಗೆ ಕುಳಿತಿದ್ದ ಈಪಕ್ಷಿ ಹಾರಿದಾಗ ಕಂಡ್ದು ಹೀಗೆ ಅದರ ಇನ್ನೊಂದು ಹಾರುವ ಭಂಗಿ ಮುಂದಿನ ಚಿತ್ರದಲ್ಲಿ |
 |
.......... ಹಾರಿದ ಇದು ಕುಳಿತಿದ್ದು ಮರದ ತುದಿಯಲ್ಲಿ ......... |
 |
.......... ಅಲ್ಲಿಂದ ಹಾರಿದ ಇದು ಕುಳಿತದ್ದು ಈ ಮುಳ್ಳು ಗಿಡದ ಮೇಲೆ....... ಅಲ್ಲಿಂದ ಅದು ಹಾರಿದ ಮೂರು ಚಿತ್ರಗಳು ......... |
 |
............ ಅಲ್ಲಿಂದ ಹಾರಿ ಇದು ಕುಳಿತದ್ದು ಇನ್ನೊಂದು ಮುಳ್ಳಿನ ಗಿಡದ ಮೇಲೆ ..... |
 |
.......... ಅಲ್ಲಿ ಕ್ಲಿಕ್ಕಿಸುತ್ತಿರುವಾಗಲೇ ಇದು ಹಾರಿದ ಚಿತ್ರ ಕೆಳಗಡೆ........ |
 |
.......... ಆಗ ನಮ್ಮ ಕಣ್ಣಿಗೆ ಬಿದ್ದದ್ದು ನೆಲದ ಮೇಲೆ ಕೂತಿದ್ದ ......... ಫೋಟೋ ತೆಗೆಯುತ್ತಿದ್ದಂತೆ ಇದು .......... |
 |
............... ದಿಕ್ಕು ಬದಲಿಸಿತು... ಒಂದು ಕ್ಷಣ ಅಷ್ಟೆ... ಅದು ಹಾರಿದ್ದು ವಿರುದ್ದ ದಿಕ್ಕಿಗೆ ಅದರ ಎರಡು ಚಿತ್ರಗಳು ಕೆಳಗಿವೆ.......... |
 |
............... ಒಂದು ಗಿಡದ ಸಣ್ಣ ಕಡ್ಡಿಯ ಮೇಲೆ ಕುಳಿತ ಈ ಸುಂದರ ಪಕ್ಷಿ ಇನ್ನೊಂದು ಕ್ಷಣದಲ್ಲೇ ಹಾರಿ .... |
 |
.............. ಕುಳಿತಿದ್ದು ಮರದ ತುದಿಯಲ್ಲಿ .... ಅದರ ಚಿತ್ರ ತೆಗೆಯುತ್ತಿರುವಂತೆಯೆ ಮತ್ತೆ ಹಾರಿದ ಎರಡು ಚಿತ್ರಗಳು ಕೆಳಗಿವೆ. ...... |
 |
.............ನೆಲದ ಮೇಲೆ ಕುಳಿತ ಇದು ಚಿತ್ರ ತೆಗೆಯಲು ಶುರು ಮಾಡುತ್ತಿದ್ದಂತೆ ಹಾರಿತು, ಹಾರಾಟದ ನಾಲ್ಕು ಚಿತ್ರಗಳು ಕೆಳಗಿವೆ...... |
 |
............. ಕಲ್ಲಿನ ಮೇಲೆ ಕುಳಿತ ಇದು ............. |
 |
.............. ಚಿತ್ರ ತೆಗೆಯುತ್ತಿರುವಂತೆಯೇ ಮತ್ತೆ ಹಾರಿತು. |